Radhas Thulunada Channel
ಶುಚಿಯಾಗಿ ರುಚಿಯಾಗಿ ತುಳುನಾಡಿನ ಹಾಗೂ ಭಾರತೀಯ ಅಡುಗೆಗಳು, ಹೊಸ ರುಚಿ, ಉಪಯೋಗವಾಗುವಂತಹ ಉತ್ತಮ ಮಾಹಿತಿಗಳು, ತುಳುನಾಡಿನ ಆಚರಣೆಗಳು..
02/12/2025
ಒಂದು ಕಾಲ್ಪನಿಕ ಬರಹ...✍️✍️
********************************
ನೀನು ಪತ್ರೊಡೆ ಮಾಡುದಿಲ್ವಾ.. ನಂಗೆ ತುಂಬಾ ಇಷ್ಟ.. ತುಂಬಾ ಆಯಿತು ತಿನ್ನದೆ..
ಸ್ವಲ್ಪ ಇದು ತೆಗೊಂಡಿದ್ದೇನೆ (ತಿಮರೆ )
ಅಲೋವೆರಾ ಉಂಟಾ... ಹಾ ಇದುವೆ.. ಸ್ವಲ್ಪ ತೆಗೊಳ್ತೇನೆ.. ಇನ್ನು ಸ್ವಲ್ಪ ಅದು ಹಾ ಎಂತ ಅಂದ್ರೆ ಅದು ಮತ್ತೆ ಸ್ವಲ್ಪ ಮೆಹಂದಿ ಕೊಯಿದುಕೊಂಡೆ..
ಹಾ ಕೆಂಪು ದಾಸವಾಳ.. ಇದುವೆ.. ನನಗೆ ಬೇಕು.. ಎಲೆ ಕೂಡಾ..
ಬೃಂಗರಾಜ ಇದೆಯಾ... ನೀನು ಇಲ್ಲಿ ಒಂದು ನೆಟ್ರೆ ತುಂಬಾ ಆಗ್ತದೆ ಅದು..
ತುಳಸಿ.. ಹಾ ಇಲ್ಲಿ ಉಂಟು.. ಕೊಯ್ದೆ ಆಯಿತಾ..
ದೊಡ್ಡಪತ್ರೆ ಎಲೆ ಉಂಟಾ??
*ಅದು ಚಿಕ್ಕ ಗಿಡ ನೋಡಿ ಅಲ್ಲಿ.. ಎಲೆ ಇಲ್ಲ..
ಅದು ಪರ್ವಾಗಿಲ್ಲ.. ನಾನು ತೆಗೊಳ್ತೇನೆ..
ಹಸಿ ಅರಶಿನ ಉಂಟಾ??
*ಹಾ ಇದೆ.. ಬಂದೆ ಕೊಡ್ತೇನೆ..
ಬೇಡ ನಾನೇ ತೆಗೊಂಡೆ..
* (ಸ್ವಗತ ) ಹಾ.. ಇದೇನಪ್ಪ ಗಿಡ ಕಿತ್ತು ಬಿಸಾಡಿ ಅರಶಿನ ತೆಗೊಂಡಿದ್ದಾರೆ 🥲..
ಹೋ ಗಾಂಧಾರಿ ಮೆಣಸು..
ತೆಗೊಂಡೆ ಆಯಿತಾ ಸ್ವಲ್ಪ ನನಗೆ ಇಷ್ಟ...🥲
ಸ್ವಲ್ಪ ಕಾಳು ಮೆಣಸು ಉಂಟಾ... ಹೀಗೆ ಹೀಗೆ.. ಅದು ಉಂಟಾ.. ಇದು ಉಂಟಾ 😂...
ಒಂದೇ ಸಲ ಕೇಳಿ ತೆಗೆದದ್ದು .. ಮತ್ತೆ ಅವರದ್ದೇ ಇಷ್ಟ.. ಕೇಳುವುದು ಇಲ್ಲ.. ಹೇಳುವುದು ಇಲ್ಲ.. ಬರುವುದು.. ಕೀಳೋದು.. ಹೋಗೋದು.. ಅವರೇ ನೆಟ್ಟು ಬೆಳೆಸಿದ ಹಾಗೆ..
ಇಷ್ಟೆಲ್ಲಾ ಅವರಿಷ್ಟದಂತೆ ಅವರೇ ತೆಗೆದುಕೊಂಡು ಹೋಗಿ ಕೊನೆಗೊಂದು ದಿನ ಅವರೇ ಬಂದು ಕಾರಣವೇ ಇಲ್ಲದೆ ಜಗಳ ಮಾಡುತ್ತಾರೆ..
ಕೆಟ್ಟದಾಗಿ ಬಯ್ಯುತ್ತಾರೆ.. ಏನೇನೋ ಏನೇನೋ ಹೇಳುತ್ತಾರೆ..
ಎಲ್ಲದಕ್ಕೂ ನಮ್ಮ ಕಡೆಯಿಂದ ಮೌನವೇ ಉತ್ತರವಾಗಿರುತ್ತದೆ.. ಯಾಕೆಂದರೆ ನಾವು ಕಾರಣ ಇಲ್ಲದೆ ಜಗಳ ಮಾಡಲೇಬೇಕೆಂದು ಬಂದ ಜಗಳ ಮಾಡುವವರಲ್ಲಿ ಜಗಳ ಮಾಡುವ ವ್ಯಕ್ತಿತ್ವದವರು ಅಲ್ಲ.
ಅಷ್ಟೇ ಅಲ್ಲ.. ನಮಗಿಂತ ಮೊದಲೇ ನಮ್ಮ ಮನೆಯವರಲ್ಲಿ ಸುಳ್ಳು ಸುಳ್ಳು ಏನೇನೋ ಹೇಳಿ ಕೊಡುತ್ತಾರೆ.. ನಾವು ಹೇಳದನ್ನು ಸೃಷ್ಟಿಸಿ ಹೇಳುತ್ತಾರೆ..
ಕೊನೆಗೆ ಶಾಪ ಕೂಡಾ ಹಾಕುತ್ತಾರೆ... ಆದರೆ ನಮ್ಮ ಮನೆಯವರಲ್ಲಿ ಇಲ್ಲದ ಚಾಡಿ ಮಾತ್ರ ಹೇಳುತ್ತಾರೆ. ಅವರು ಅವರಾಗಿಯೇ ಬಂದದ್ದು ಅವರಾಗಿಯೇ ಜಗಳ ಮಾಡಿದ್ದು.. ಕೆಟ್ಟದಾಗಿ ಬೈದದ್ದು.. ಶಾಪ ಹಾಕಿದ್ದು ಏನೂ ಹೇಳುವುದಿಲ್ಲ.. ಏನೋ ನಮ್ಮ ಮನೆಯವರು ಒಳ್ಳೆಯವರಾಗಿದ್ರೆ ನಮ್ಮ ಭಾಗ್ಯ.. ಇಲ್ಲಾ ಅಂದ್ರೆ ಮನೆಯಿಂದ ಹೊರ ಹಾಕುವವರೆಗೆ ಈ ಕೆಟ್ಟ ಅಸಹ್ಯ ಜನರು ಬಿಡಲ್ಲ..
ಅದು ಇದು ಕೇಳಿ ತೆಗೆದುಕೊಂಡು ಹೋದ ಅವರೇ ಹೇಳುತ್ತಾರೆ ಇನ್ನು ಅವಳು (ನಾನು )ನಮ್ಮ ಮನೆಗೆ ಅದು ಇದು ಕೇಳಿಕೊಂಡು ಬರುವುದು ಬೇಡ ಅಂತ..😂..
ದೇವ್ರೇ ನಾವು ಯಾರಿಗಾದ್ರೂ ಸಹಾಯ ಮಾಡೋಕೆ ಅಲ್ಲದೆ ಸುಮ್ಮನೆ ಸುಮ್ಮನೆ ಒಬ್ಬರ ಮನೆಗೆ ಹೋಗಿ ಹರಟೆ ಹೊಡೆಯುವವರು ಅಲ್ಲ.. ಹೋಗುವವರೇ ಅಲ್ಲ.. ಇದು ಎಂತ ಮಾತು.. ನಾವು ಹಾಗೆಲ್ಲಾ ಹೋಗುವವರೇ ಅಲ್ಲ.. ಅವಸ್ಥೆ ಮಾರ್ರೇ..
ಅಯ್ಯೋ ದೇವರೇ.. ಇಲ್ಲಿ ಕೇಳಿಕೊಂಡು ಬರ್ತಾ ಇದ್ದದ್ದು ಯಾರು ದೇವರೇ?? ನನಗಂತೂ ಪೂರ್ತಿ ಗೊಂದಲಮಯ..ಇನ್ನೊಬ್ಬರ ಮನೆಯಿಂದ ಯಾವ ವಸ್ತುಗಳನ್ನು ಕೂಡಾ ಕೇಳಿ ತರುವಷ್ಟು ದುರಾಸೆ ಅಂತು ಇಲ್ಲವೇ ಇಲ್ಲ..
ಅಷ್ಟೇ ಅಲ್ಲ.. ಮನೆಯ ಯಜಮಾನನಲ್ಲಿ ನಾನು ನಿಮ್ಮ ಮನೆ ಅಂದುಕೊಂಡು ಬರ್ತಾ ಇದ್ದದ್ದು..
ಅವಳು ಆ ಮನೆಯಲ್ಲಿ ಇರುವುದರಿಂದ ನಾನು ಇನ್ನು ಬರುವುದಿಲ್ಲ ಎಂದು ಹೇಳುತ್ತಾರೆ 😂..
ಅಲ್ಲ.. ಹಾಗಾದ್ರೆ ನನ್ನ ಮನೆ ಯಾವುದು??
ಇಷ್ಟು ದಿನ ರಾಗ ಎಳೆದುಕೊಂಡು ನಮ್ಮಲ್ಲಿಗೆ ಬರುತ್ತಿದ್ದದ್ದು?? ಹಾಗಾದ್ರೆ ನಾನು ನೆಟ್ಟ ಗಿಡದ ಎಲೆಗಳು, ಹೂವು ಎಲ್ಲವೂ??? ನಗಬೇಕೋ ಅಳಬೇಕೋ?? ನನಗೆ ಅವರ ಮೇಲೆ ಅಸಹ್ಯವಾಯಿತು.. ಎಷ್ಟು ಕೀಳಾಗಿ ಯೋಚಿಸುತ್ತಾರೆಂದು??
ಕಲಿಯುಗ ಅಲ್ವಾ?? ಕೇಳಿಕೊಂಡು ಬರ್ತಾ ಇದ್ದದ್ದು ಅವರು.. ತೆಗೆದುಕೊಂಡು ಹೋಗುತ್ತಿದ್ದದ್ದು ಅವರು.. ಅಪವಾದ ನಮಗೆ... ಇದು ಯಾವ ನ್ಯಾಯ ಮಾರ್ರೇ.. ಕಲಿಯುಗದ ಮಹಿಮೆನಾ???...
ಅದಕ್ಕೆ ಹೇಳುವುದು ಈ ಕೆಟ್ಟ ಜನರಿಗೆ ಹೆಚ್ಚು ಸ್ವಾತಂತ್ರ್ಯ ಕೊಡಬಾರದು ಎಂದು. ನಾನಂತೂ ಒಳ್ಳೆಯ ಪಾಠ ಕಲಿತೆ.. ನನ್ನ ಅಕ್ಕ ಪಕ್ಕದ ಜನರೂ ಕೂಡಾ ಒಳ್ಳೆಯ ಪಾಠ ಕಲಿತರು.. ಇನ್ನು ಏನಿದ್ದರೂ ನೇರವಾಗಿ ಮಾತಾಡುವುದು ಅಷ್ಟೇ..
ಸುಮ್ಮನೆ ಒಂದು ಕಾಲ್ಪನಿಕ ಬರಹ.. ಸುಮ್ಮನೆ ಇದ್ದರೂ ಕಷ್ಟ ಎಂದು.. ಹೀಗೆಯೂ ಆಗುವ ಸಾಧ್ಯತೆ ಇರುತ್ತದೆ ಎಂದು.. ವಿಷಯ ಏನು ಅಂದರೆ ಮೂರನೆಯವರಿಗೆ ಎಷ್ಟು ಸ್ವಾತಂತ್ರ್ಯ ನೀಡಬೇಕೋ ಅಷ್ಟು ಮಾತ್ರ ನೀಡಿ.. ಯಾರಿಂದ ಯಾವಾಗ ಹೇಗೆ ಅಪಾಯ, ಅಪವಾದ ಬರಬಹುದು ಎನ್ನುವುದು ಊಹಿಸಲು ಕೂಡಾ ಆಗಲ್ಲ.. ಮುನ್ನೆಚ್ಚರಿಕೆ ಅಗತ್ಯ ಎನ್ನುವ ಉದ್ಧೇಶಕ್ಕಷ್ಟೇ ಈ ಕಾಲ್ಪನಿಕ ಬರಹ.. ಸಮಯ ಸರಿ ಇಲ್ಲದಾಗ ನಾವು ಎಷ್ಟೇ ಸರಿಯಾಗಿ ಇದ್ದರೂ ಎಷ್ಟೇ ನಿಷ್ಠೆ ನಿಯತ್ತಿನಿಂದ ಇದ್ದರೂ, ನಾವು ಎಷ್ಟೇ ಸತ್ಯವಂತರಾಗಿದ್ದರೂ ನಮ್ಮ ಹೆಸರು, ವ್ಯಕ್ತಿತ್ವ ಕೆಡಿಸಲು ಬೇರೆಯವರು ಶ್ರಮಿಸುವ ಸಾಧ್ಯತೆ ಹೆಚ್ಚು..
ಇಲ್ಲಿ ಕೆಲವೊಮ್ಮೆ ನಮ್ಮವರ ಬೆಂಬಲವೇ ನಮಗೆ ಸಿಗದೆ ಇರುವ ಸಾಧ್ಯತೆ ಕೂಡಾ ಇದೆ..🥲
✍️ಸುಪ್ರೀತ ಪದ್ಮನಾಭ ಅಡ್ಕತ್ ಬೈಲ್
Click here to claim your Sponsored Listing.
Category
Contact the business
Website
Address
671121