Umesh Itagi

Umesh  Itagi

Share

Contact information, map and directions, contact form, opening hours, services, ratings, photos, videos and announcements from Umesh Itagi, Musician, Malleshwaram, Memphis, TN.

01/30/2026

ಶ್ರಮದ ಹಾದಿ, ಯಶಸ್ಸಿನ ಸಾರಥಿ - ನಮ್ಮ ಬಿ.ಎಸ್.ವೈ ಅಪ್ಪಾಜಿ✌️🙏
ದಕ್ಷಿಣ ಪಥದ ಹರಿಕಾರ, ಅಭಿವೃದ್ಧಿಯ ಪುತ್ರನಿಗೆ ಸಂದ ‘ನವ ನಕ್ಷತ್ರ’ ಗೌರವ!

“ಕರ್ನಾಟಕ ಕಂಡ ಅಪ್ರತಿಮ ಜನನಾಯಕ, ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಟಿವಿ9 ವತಿಯಿಂದ ನೀಡಲಾದ ‘ನವ ನಕ್ಷತ್ರ’ ಪ್ರಶಸ್ತಿ ಲಭಿಸಿರುವುದು ಪ್ರತಿ ಕನ್ನಡಿಗನಿಗೆ ಹಾಗೂ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಹೆಮ್ಮೆಯ ಕ್ಷಣ.

“ಹಗಲಿರುಳು ನಾಡಿನ ಏಳಿಗೆಗಾಗಿ ಶ್ರಮಿಸಿದ, ಹಳ್ಳಿಯಿಂದ ದಿಲ್ಲಿಯವರೆಗೆ ಕರ್ನಾಟಕದ ಕೀರ್ತಿಯನ್ನು ಪಸರಿಸಿದ ನೀವು ಜನರ ಪಾಲಿಗೆ ಎಂದಿಗೂ ಆಪದ್ಬಾಂಧವರು. ಅಧಿಕಾರವಿರಲಿ ಇಲ್ಲದಿರಲಿ, ನೀವು ಎಂದಿಗೂ ಜನರ ಮನಸ್ಸಿನ ‘ನವ ನಕ್ಷತ್ರ’. ನಿಮ್ಮ ಸುದೀರ್ಘ ರಾಜಕೀಯ ಜೀವನ ಮತ್ತು ಜನಸೇವೆ ನಮಗೆಲ್ಲರಿಗೂ ಸ್ಫೂರ್ತಿ. ಈ ಪ್ರಶಸ್ತಿ ನಿಮ್ಮ ಜನಪ್ರಿಯತೆಗೆ ಸಂದ ಗೌರವ. ಜನರ ಸೇವೆಯನ್ನೇ ಪರಮಧರ್ಮ ಎಂದು ನಂಬಿದ ನಿಮಗೆ ಈ ಪ್ರಶಸ್ತಿ ಕೇವಲ ಒಂದು ಗೌರವವಲ್ಲ, ಇದು ಕೋಟ್ಯಂತರ ಕನ್ನಡಿಗರ ಪ್ರೀತಿಯ ಪ್ರತಿಬಿಂಬ.”

ಅವರು ನೀಡಿರುವ ಕೆಲವು ಕೊಡುಗೆಗೆಳನ್ನು ಇಲ್ಲಿ ನೆನಪಿಸಲಿಕ್ಕೆ ಪ್ರಯತ್ನ ಮಾಡುತ್ತಿದ್ದೆನೆ:

ಕರ್ನಾಟಕಕ್ಕೆ ನಿಮ್ಮ ಕೊಡುಗೆ ಚಿರಸ್ಮರಣೀಯ:

• ರೈತ ಬಜೆಟ್: ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪ್ರತ್ಯೇಕ ರೈತ ಬಜೆಟ್ ಮಂಡಿಸಿ, ಕೃಷಿಕರ ಬದುಕಿಗೆ ಆಸರೆಯಾದವರು ನೀವು.
• ಭಾಗ್ಯಲಕ್ಷ್ಮಿ ಯೋಜನೆ: ಹೆಣ್ಣುಮಕ್ಕಳ ಭವಿಷ್ಯಕ್ಕೆ ಭದ್ರತೆ ನೀಡಿದ ನಿಮ್ಮ ಯೋಜನೆ ಇಂದು ಕೋಟ್ಯಂತರ ಮನೆಗಳಲ್ಲಿ ಬೆಳಕಾಗಿದೆ.
• ಮಠ-ಮಾನ್ಯಗಳ ಅಭಿವೃದ್ಧಿ: ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಠ-ಮಾನ್ಯಗಳಿಗೆ ನೀವು ನೀಡಿದ ಸಹಕಾರ ಅನನ್ಯ.
• ಮೂಲಸೌಕರ್ಯ: ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ರಸ್ತೆ, ನೀರಾವರಿ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ನೀವು ನೀಡಿದ ವೇಗ ಕರ್ನಾಟಕವನ್ನು ಮುಂಚೂಣಿಯಲ್ಲಿ ನಿಲ್ಲಿಸಿದೆ.
• ಸೈಕಲ್ ವಿತರಣಾ ಯೋಜನೆ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ನೀವು ಜಾರಿಗೆ ತಂದ ‘ಉಚಿತ ಸೈಕಲ್’ ಯೋಜನೆ ಲಕ್ಷಾಂತರ ಹೆಣ್ಣುಮಕ್ಕಳ ಶಿಕ್ಷಣದ ಕನಸಿಗೆ ರೆಕ್ಕೆ ನೀಡಿತು. 🚲
• ಸಂಧ್ಯಾ ಸುರಕ್ಷಾ: ವಯಸ್ಸಾದ ಕಾಲದಲ್ಲಿ ಯಾರ ಆಸರೆಯೂ ಇಲ್ಲದ ಹಿರಿಯರಿಗೆ ಗೌರವಯುತ ಜೀವನ ನೀಡಲು ನೀವು ತಂದ ‘ಸಂಧ್ಯಾ ಸುರಕ್ಷಾ’ ಮಾಸಾಶನ ಯೋಜನೆ ಲಕ್ಷಾಂತರ ಹಿರಿಯ ಜೀವಗಳಿಗೆ ಆಸರೆಯಾಗಿದೆ.

ನಿಮಗೆ ನೀವು ನಂಬಿದ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಹಾಗೂ ಹುಚ್ಚರಾಯಸ್ವಾಮಿ ದೇವರು, ಆಯುಷ್ಯ,ಆರೋಗ್ಯ ಮತ್ತು ಸುಖ-ಶಾಂತಿ ನೀಡಿ ಸದಾ ಕಾಲ ನಿಮಗೆ ನೀಡಿಲಿ.
ನಮ್ಮಂಥಹ ಲಕ್ಷಾಂತರ ಯುವಕರಿಗೆ ಮಾರ್ಗದರ್ಶನ ನೀಡುವಂತೆ ನಿಮಗೆ ಶುಭ ಕೊರುತ್ತೇನೆ..!

ಹೃತ್ಪೂರ್ವಕ ಅಭಿನಂದನೆಗಳು ಬಿ.ಎಸ್.ವೈ ಜೀ🙏✨✌️

KarnatakaPride BSY LegendaryLeader JanapriyaNayaka

BS Yediyurappa
B Y Raghavendra
Vijayendra Yediyurappa
BJP Karnataka

Want your public figure to be the top-listed Public Figure in Memphis?
Click here to claim your Sponsored Listing.

Category

Telephone

Website

Address

Malleshwaram
Memphis, TN