NSUI Rajajinagar Assembly

NSUI Rajajinagar Assembly

Share

Voice of Student. Students is the Future of India

14/04/2022

40% ಕಮಿಷನ್ ಕಿರುಕುಳ ನೀಡಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಕಾರಣರಾಗಿರುವ ಸಚಿವ ಈಶ್ವರಪ್ಪ ಅವರನ್ನು ಬಂಧಿಸುವ ಬದಲು ನ್ಯಾಯ ಕೇಳಿದ ನಮ್ಮನ್ನೇ ರಾಜ್ಯ ಸರ್ಕಾರ ಬಂಧಿಸಿದೆ.

ಬಲಪ್ರಯೋಗದ ಮೂಲಕ ನಮ್ಮನ್ನು ಸುಮ್ಮನಾಗಿಸಬಹುದು ಎಂದು ಅಂದುಕೊಂಡಿದ್ದರೆ ಅದು ಸರ್ಕಾರದ ಭ್ರಮೆ. ಸಂತೋಷ್ ಪಾಟೀಲ್ ಸಾವಿಗೆ ನ್ಯಾಯ ಸಿಗುವವರೆಗೆ ನಾವು ಹೋರಾಟ ಕೈಬಿಡುವುದಿಲ್ಲ. ನಮ್ಮನ್ನು ಬಂಧಿಸುವ ಮೂಲಕ ಭ್ರಷ್ಟಾಚಾರಿಗಳಿಗೆ ಬೆಂಬಲವಾಗಿ ನಿಂತಿರುವ ಬಿಜೆಪಿ ಸರ್ಕಾರ ಇಂದು ಮತ್ತೊಮ್ಮೆ ರಾಜ್ಯದ ಜನರೆದುರು ಬೆತ್ತಲಾಗಿದೆ.

12/04/2022

ಸಂತೋಷ್ ಪಾಟೀಲ್ ಅವರ “ಆತ್ಮಹತ್ಯೆ” ಕುರಿತು ಕಾಲಮಿತಿಯೊಳಗೆ ನ್ಯಾಯಾಂಗ ತನಿಖೆಗೆ ನಾನು ಒತ್ತಾಯಿಸುತ್ತೇನೆ.

ಬಿಜೆಪಿ ನಾಯಕರು ಮತ್ತು ಸಚಿವರು ಲಂಚ ಕೇಳುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪ ಮಾಡಿದ್ದ ಉದ್ಯಮಿಯೊಬ್ಬರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.
ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ.

ಬಿಜೆಪಿಯ ಲಂಚಕೋರತನದಿಂದಾಗಿ ಉದ್ಯೋಗದಾತರು ತೊಂದರೆಗೀಡಾಗಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಲು ಇದೂ ಒಂದು ಕಾರಣ. ಭ್ರಷ್ಟ ಬಿಜೆಪಿ ಸರ್ಕಾರದ ಲಂಚದ ದಾಹಕ್ಕೆ ಹೆದರಿ ಖಾಸಗಿ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ನಿರಾಸಕ್ತಿ ತೋರುತ್ತಿವೆ.

Want your organization to be the top-listed Government Service in Bangalore?
Click here to claim your Sponsored Listing.

Website

Address


Rajajinagar
Bangalore