BJP Mahalakshmi Layout

BJP Mahalakshmi Layout

Share

Official Page of BJP Mahalakshmi Layout,
BJP Bengaluru North District

20/04/2026

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ಹಬ್ಬದ ಹಾರ್ದಿಕ ಶುಭಾಶಯಗಳು. 🙏🏼

#ಅಕ್ಷಯತೃತೀಯ

Photos from BJP Mahalakshmi Layout's post 20/04/2026

ಇಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮೈಸೂರ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಎದುರಿಗಿರುವ ಬಸವಧಾಮದಲ್ಲಿ ಶರಣರ ಸಾಂಸ್ಕೃತಿಕ ಕಂಪು ಮೇಳೈಸಿತ್ತು.
ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭ ಸಂದರ್ಭದಲ್ಲಿ, ನಾನು ನನ್ನ ಕುಟುಂಬ ಸಮೇತ ಭಕ್ತಿಯಿಂದ ಪಾಲ್ಗೊಂಡು, ಅಣ್ಣ ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದೆ. ಕಾರ್ಯಕ್ರಮಕ್ಕೆ ಮೆರುಗು ನೀಡುವಂತೆ ಖ್ಯಾತ ಗಾಯಕ ಶ್ರೀ ಶಶಿಧರ್ ಕೋಟೆ ಅವರಿಂದ 'ವಚನಗಾನ ವೈಭವ' ಜರುಗಿತು. ಅರ್ಥಪೂರ್ಣ ವಚನಗಳ ಗಾಯನವು ನೆರೆದಿದ್ದ ಭಕ್ತರ ಮನಸ್ಸಿನಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಭಾವವನ್ನು ಮೂಡಿಸಿತು.

ಈ ಸಮಾರಂಭದಲ್ಲಿ ಕೇವಲ ಭಕ್ತಿ ಮಾತ್ರವಲ್ಲದೆ ಪ್ರತಿಭೆಗೂ ಮನ್ನಣೆ ನೀಡಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 21ನೇ ರಾಂಕ್ ಪಡೆದು ಕ್ಷೇತ್ರದ ಕೀರ್ತಿ ಹೆಚ್ಚಿಸಿದ ಕಮಲಾನಗರದ ನಿವಾಸಿ ಪ್ರವೀಣ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಶರಣರ ಆಶೀರ್ವಾದದೊಂದಿಗೆ ಈ ಯುವ ಪ್ರತಿಭೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಲಿ ಎಂಬ ಹಾರೈಕೆ ನಮ್ಮದಾಗಿತ್ತು.
"ಕಾಯಕವೇ ಕೈಲಾಸ" ಎಂಬ ತತ್ವದಡಿ ನಡೆದ ಈ ಕಾರ್ಯಕ್ರಮವು ಬಸವಣ್ಣನವರ ಸಮಾನತೆಯ ಸಂದೇಶವನ್ನು ಮತ್ತೊಮ್ಮೆ ನೆನಪಿಸಿಕೊಟ್ಟಿತು.

20/04/2026

ಕಾಯಕ ಮತ್ತು ದಾಸೋಹದ ಹಾದಿಯಲ್ಲಿ ನಾವೆಲ್ಲರೂ ಸಾಗೋಣ.
"ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ..." 🙏🏼

ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು.

06/04/2026

ದೇಶದ ಹಿತಾಸಕ್ತಿಯನ್ನೇ ಆದ್ಯತೆಯಾಗಿಸಿಕೊಂಡು ಸೇವಾ ಭಾವನೆಯೊಂದಿಗೆ ಬಿಜೆಪಿಯನ್ನು ಮುನ್ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿವರು...

ಅವರೆಲ್ಲರ ದೂರದೃಷ್ಟಿ, ಸಮರ್ಥ ನಾಯಕತ್ವದಿಂದಾಗಿ ಬಿಜೆಪಿಯು ಇಂದು ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ.

ಸೇವೆಯೇ ಗುರಿ ಎಂಬ ಸಮರ್ಪಣಾ ಮನೋಭಾವದೊಂದಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ಬಿಜೆಪಿ ಸ್ಥಾಪನಾ ದಿನದ ಶುಭಾಶಯಗಳು.

06/04/2026

ಕಾರ್ಯಕರ್ತರ ಬೆವರಿನಿಂದ ಕಟ್ಟಿದ ಮಹಾಸೌಧ: ಬಿಜೆಪಿ 🪷

ಬಿಜೆಪಿಯ ಉಗಮ ಮತ್ತು ಬೆಳವಣಿಗೆಯ ಹಿಂದೆ ಅಚಲವಾದ ರಾಷ್ಟ್ರೀಯತಾ ಸಿದ್ಧಾಂತವಿದೆ. ಜನಸಂಘದ ಕಾಲದಿಂದಲೂ 'ದೇಶ ಮೊದಲು, ಆಮೇಲೆ ಪಕ್ಷ, ಕೊನೆಯಲ್ಲಿ ನಾನು' ಎಂಬ ತತ್ವವನ್ನು ಕಾರ್ಯಕರ್ತರು ಮೈಗೂಡಿಸಿಕೊಂಡಿದ್ದಾರೆ. ಮಾಧ್ಯಮಗಳು ಈ ಪಕ್ಷವನ್ನು ನಿರ್ಲಕ್ಷಿಸಿದಾಗ ಅಥವಾ ವಿರೋಧಿಸಿದಾಗಲೂ, ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಿದ್ಧಾಂತವನ್ನು ತಲುಪಿಸುವ ಕೆಲಸ ಮಾಡಿದರು. ಪತ್ರಿಕೆಗಳ ಬೆಂಬಲವಿಲ್ಲದ ಕಾಲದಲ್ಲೂ ಗೋಡೆ ಬರಹಗಳ ಮೂಲಕ, ಕರಪತ್ರಗಳ ಮೂಲಕ ಪಕ್ಷದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಕಾರ್ಯಕರ್ತರಿಗೆ ಸಲ್ಲುತ್ತದೆ.

#ಬಿಜೆಪಿಸ್ಥಾಪನಾದಿನ


BJP Karnataka
Bharatiya Janata Party (BJP)

06/04/2026

ಬಿಜೆಪಿಯ ಸಮಸ್ಥ ಕಾರ್ಯಕರ್ತರಿಗೆ ಸಂಸ್ಥಾಪನಾದಿನದ
ಹಾರ್ದಿಕ ಶುಭಾಶಯಗಳು.

ಸಂಕಲ್ಪ, ಸೇವೆ ಮತ್ತು ಸಮರ್ಪಣೆಯಿಂದ ಭಾರತೀಯ ಜನತಾ ಪಾರ್ಟಿಯನ್ನು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಸಿದ ಪ್ರತಿಯೊಬ್ಬ ದೇವದುರ್ಲಭ ಕಾರ್ಯಕರ್ತರಿಗೆ ಬಿಜೆಪಿ ಸ್ಥಾಪನಾ ದಿನದ ಶುಭಾಶಯಗಳು.

ಪಕ್ಷದ ಪ್ರತಿಯೊಂದು ಹೆಜ್ಜೆಯಲ್ಲೂ ಕಾರ್ಯಕರ್ತರ ತ್ಯಾಗ, ಹಿರಿಯರ ಮಾರ್ಗದರ್ಶನ ಮತ್ತು ಜನರ ವಿಶ್ವಾಸವಿದೆ.

ಸ್ಥಾಪನಾ ದಿನದ ಈ ಶುಭ ಸಂದರ್ಭದಲ್ಲಿ, ನಮ್ಮ ಸಂಘಟನೆಯ ಶಕ್ತಿಯನ್ನು ಮತ್ತಷ್ಟು ಬಲಪಡಿಸಿ, ಜನಸೇವೆಗಾಗಿ ನಿಷ್ಠೆಯಿಂದ ಮುಂದುವರೆಯುವ ಸಂಕಲ್ಪ ಮಾಡೋಣ. 🙏🏼


#ಬಿಜೆಪಿಸ್ಥಾಪನಾದಿನ

27/03/2026

ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. 💛❤️🙏🏼

ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ.

Want your organization to be the top-listed Government Service in Bangalore?
Click here to claim your Sponsored Listing.

Address


Mahalakshmi Layout
Bangalore
560086