Dr. Ganapati R Bhat

Dr. Ganapati R Bhat

Share

ಸಂಸ್ಕೃತಂ ಸಂಸ್ಕೃತಿಶ್ಚ

16/05/2026
04/03/2026
17/10/2025

'ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್' ಅಂದರೆ, ಕಾವ್ಯಶಾಸ್ತ್ರವನ್ನು ಆಮೂಲಾಗ್ರವಾಗಿ ವಿಶ್ಲೇಷಿಸುತ್ತಾ ಪಂಡಿತರು ವಿನೋದದಿಂದ ತಮ್ಮ ಬಹುಪಾಲು ಸಮಯವನ್ನು ಕಳೆಯುತ್ತಾರೆ ಎನ್ನುವ ಈ ಹಿತೋಪದೇಶದ ನುಡಿಯನ್ನು ಕೇಳಿಸಿಕೊಂಡಾಗ ಅರೆ! ಒಂದೊಂದು ಪದವೂ ವಿತರ್ಕವೆನಿಸಿ ಕಗ್ಗಂಟೆನಿಸುವ ಶಾಸ್ತ್ರಗಳನ್ನು ಅವಲೋಕಿಸುವುದರಲ್ಲಿ ವಿನೋದವು ಹೇಗೆ ಬಂದೀತೆಂಬುದು ಅನೇಕರಿಗೆ ಸಹಜ ಪ್ರಶ್ನೆಯಾಗಿರುತ್ತದೆ. ಅದಕ್ಕೆ ದೃಷ್ಟಾಂತ ರೂಪದಲ್ಲಿ ನಮಗೆ ಇಂದಿಗೂ ನೋಡಲಿಕ್ಕೆ ಸಿಗುವ ಉದಾಹರಣೆಯಂದರೆ ಅವಧಾನ ಕಲೆ.

ಇಂದಿನ "ರೀಲ್ಸ್ ಯುಗ"ದಲ್ಲಿ ಒಂದರ್ಧ ನಿಮಿಷ ಕಾಲವನ್ನೂ ವ್ಯವಧಾನದಿಂದ ಕಳೆಯಲು ಅಸಾಧ್ಯವಾಗಿರುವ ಹೊತ್ತಲ್ಲಿ ಶತಾವಧಾನಿ ಆರ್ ಗಣೇಶರ ಪ್ರೇರಣೆಯೊಂದಿಗೆ ಹತ್ತಾರು ಯುವ ಸಂಸ್ಕೃತಜ್ಞರು ಅವಧಾನಿಗಳಾಗಿ ಹೊರಹೊಮ್ಮುತ್ತಿರುವುದು ಮಹತ್ತರವಾದ ಬೆಳವಣಿಗೆಯೆನಿಸುತ್ತದೆ. ಇತ್ತೀಚೆಗೆ ವಿದುಷಿ ಶ್ರುತಿ ಕಾನಿಟ್ಕರ್ ಅವರು ಅಷ್ಟಾವಧಾನ ಕಾರ್ಯಕ್ರಮ ನಡೆಸಿ ಪ್ರಪ್ರಥಮ ಮಹಿಳಾ ಅವಧಾನಿನಿಯಾಗಿದ್ದು ಈ ಕಲೆಯು ಅದೆಷ್ಟು ವ್ಯಾಪಕವಾಗಿ ಪ್ರಚುರಗೊಳ್ಳುತ್ತಿದೆ ಎಂಬುದಕ್ಕೆ ನಿದರ್ಶನ.

ಅಂದಹಾಗೆ,

ಇತ್ತೀಚೆಗೆ ಸುಧರ್ಮಾ ಸಂಸ್ಕೃತ ದಿನಪತ್ರಿಕೆಯ ವತಿಯಿಂದ ಮೈಸೂರಿನಲ್ಲಿ ಅವಧಾನಿಗಳಾದ ವಿದ್ವಾನ್ ಎನ್ ಉಮಾಮಹೇಶ್ವರರಿಂದ ರಾಮಾಯಣ ದಶಾವಧಾನ ಕಾರ್ಯಕ್ರಮ ನಡೆಯಿತು. ಅಲ್ಲಿ ಸಭಿಕರಿಗೆ ಅವಧಾನವನ್ನು ಪರಿಚಯಿಸುವ ಜವಾಬ್ದಾರಿಯನ್ನು ನಾನು ನಿರ್ವಹಿಸಿದ ವಿಡಿಯೋ ತುಣುಕನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

Want your public figure to be the top-listed Public Figure in Bangalore?
Click here to claim your Sponsored Listing.

Category

Address


Bangalore
560085