Jayateerth Katti
🔥 “ಹಿಂದುತ್ವವೇ ನನ್ನ ಉಸಿರು – ಭಾರತ ಮಾತೆಯ ಸೇವೆಯೇ ನನ್ನ ಧರ್ಮ!”🚩
ಧಾರವಾಡ ವಿಭಾಗ ಪ್ರಭಾರಿ, ಕರ್ನಾಟಕ at Bharatiya Janata Party (BJP)
11/05/2026
ಸ್ವಾರ್ಥಕ್ಕಿಂತ ರಾಷ್ಟ್ರ ಹಿತವೇ ಮುಖ್ಯ ಎಂಬ ಸಂದೇಶದೊಂದಿಗೆ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ Narendra Modi ಅವರು ನೀಡಿರುವ 7 ಮಹತ್ವದ ಕರೆಗಳು ಪ್ರತಿಯೊಬ್ಬ ಭಾರತೀಯರೂ ಪಾಲಿಸಬೇಕಾದ ಜವಾಬ್ದಾರಿ.
• ಸಾಧ್ಯವಾದಷ್ಟು Work From Home
• ಒಂದು ವರ್ಷ ಚಿನ್ನ ಖರೀದಿ ತಪ್ಪಿಸಿ
• ಸಾರ್ವಜನಿಕ ಸಾರಿಗೆ ಬಳಸಿ ಇಂಧನ ಉಳಿಸಿ
• ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ
• ನೈಸರ್ಗಿಕ ಕೃಷಿಯತ್ತ ಮುಖ ಮಾಡಿ
• ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿ
• ಒಂದು ವರ್ಷ ವಿದೇಶ ಪ್ರವಾಸ ತಪ್ಪಿಸಿ
ಸಣ್ಣ ಸಣ್ಣ ಬದಲಾವಣೆಗಳೇ ದೊಡ್ಡ ರಾಷ್ಟ್ರ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತವೆ.
“Nation First” ಎಂಬ ಸಂಕಲ್ಪದೊಂದಿಗೆ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಕೈಜೋಡಿಸೋಣ. 🙏🇮🇳
10/05/2026
“ಮಾತೃದೇವೋ ಭವ”
ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು.
ತಾಯಿಯ ಪ್ರೀತಿ ನಿಸ್ವಾರ್ಥ, ತಾಯಿಯ ತ್ಯಾಗ ಅಮೂಲ್ಯ, ತಾಯಿಯ ಆಶೀರ್ವಾದ ಜೀವನದ ದೊಡ್ಡ ಶಕ್ತಿ. ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತಿರುವ ಎಲ್ಲಾ ತಾಯಂದಿರಿಗೆ ಗೌರವಪೂರ್ವಕ ನಮನಗಳು.
ತಾಯಿ ಎಂದರೆ ದೇವರ ಅತ್ಯಂತ ಸುಂದರ ಕೊಡುಗೆ ❤️
09/05/2026
ಚಿತ್ರದುರ್ಗದ ಮಾದಾರ ಚೆನ್ನಯ್ಯ ಮೈದಾನದಲ್ಲಿ ಅದ್ಧೂರಿಯಾಗಿ ನಡೆದ “ಬಿಎಸ್‌ವೈ ಅಭಿಮಾನೋತ್ಸವ” ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣಗಳು.
ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರು, ರೈತಪರ ಚಿಂತನೆಯ ಮೂಲಕ ಲಕ್ಷಾಂತರ ಜನರ ಮನ ಗೆದ್ದ ಮಾಜಿ ಮುಖ್ಯಮಂತ್ರಿಗಳು ಹಾಗೂ ನಮ್ಮೆಲ್ಲರ ಪ್ರೇರಣೆಯಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ BS Yediyurappa ಅವರ ಸಾರ್ವಜನಿಕ ಜೀವನದ ಸಾರ್ಥಕ ಪಯಣಕ್ಕೆ ಗೌರವ ಸಲ್ಲಿಸುವ ಅಪೂರ್ವ ಸಮಾರಂಭ ಇದಾಗಿತ್ತು.
ನಾಡಿನ ವಿವಿಧ ಮಠಾಧೀಶರು ಹಾಗೂ ಪೂಜ್ಯರ ಆಶೀರ್ವಾದದ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರಾದ Amit Shah, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ B. L. Santhosh, ರಾಜ್ಯಾಧ್ಯಕ್ಷರಾದ Vijayendra Yediyurappa, ಕೇಂದ್ರ ಸಚಿವರಾದ ಶ್ರೀ Pralhad Joshi, ಸಂಸದರಾದ ಶ್ರೀ Basavaraj Bommai ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಸಾವಿರಾರು ಕಾರ್ಯಕರ್ತರ ಉತ್ಸಾಹ, ಅಭಿಮಾನ ಮತ್ತು ನಾಯಕತ್ವದ ಮೇಲಿನ ಅಪಾರ ನಂಬಿಕೆ ಕಾರ್ಯಕ್ರಮದ ವೈಭವವನ್ನು ಮತ್ತಷ್ಟು ಹೆಚ್ಚಿಸಿತು.
ಿಮಾನೋತ್ಸವ
Click here to claim your Sponsored Listing.
Category
Website
Address
Hubli
580024