Addoor Central Committee

Addoor Central Committee

Share

Non Profit Organization formed by self minded people from Addoor to focus on Education & Healthcare.

09/12/2025

*ಅಡ್ಡೂರು ಸೆಂಟ್ರಲ್ ಕಮಿಟಿ ಇದರ ಆರನೇ ಅವಧಿಯ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ನಂದ್ಯ ಆಯ್ಕೆ.*

ಅಡ್ಡೂರು ಸೆಂಟ್ರಲ್ ಕಮಿಟಿಯ 2025 - 26 ನೇ ಸಾಲಿನ ಮಹಾಸಭೆಯು ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ MS ರಫೀಕ್ ರವರ ಅಧ್ಯಕ್ಷತೆಯಲ್ಲಿ *. ಮವಾದಿ ರೆಸಾರ್ಟ್* ಸಫ್ವಾ ದಮ್ಮಾಮ್ ನಲ್ಲಿ ನವೆಂಬರ್ 21 ಶುಕ್ರವಾರದಂದು ನಡೆಯಿತು.

▶️ ಕಮಿಟಿಯ ಸಲಹೆಗಾರರಾದ A.P. ಮುಹಮ್ಮದ್ ರವರು ಕಿರಾಅತ್ ಪಠಿಸುವುದರೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು.

▶️ ಜುಬೈಲ್ ಕಮಿಟಿಯ ಕಾರ್ಯದರ್ಶಿ ರಶೀದ್ Ak ಆಗಮಿಸಿದ ಎಲ್ಲಾ ಏರಿಯಾ ಕಮಿಟಿ ಅಧ್ಯಕ್ಷರು, ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರನ್ನು ಹಾರ್ದಿಕವಾಗಿ ಸ್ವಾಗತಿಸಿದರು .

▶️ ಕಮಿಟಿಯ ಪ್ರದಾನ ಕಾರ್ಯದರ್ಶಿ ಮನ್ಸೂರ್ ಇವರು ವಾರ್ಷಿಕ ವರದಿ ಮಂಡಿಸಿದರು.

▶️ ಕಮಿಟಿಯ ಜೊತೆ ಕಾರ್ಯದರ್ಶಿ ಖಲಂದರ್ ಗುತ್ತು ಇವರು ಸವಿಸ್ತಾರವಾಗಿ ವಾರ್ಷಿಕ ಹಣಕಾಸಿನ ವರದಿ ಮಂಡಿಸಿದರು ಹಾಗೂ ಸಭೆಯಲ್ಲಿ ಇದನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು.

▶️M.S. ರಫೀಕ್ ಅಧ್ಯಕ್ಷೀಯ ಭಾಷಣ ಮಾಡಿ ಕಮಿಟಿಯ ಏಳಿಗೆಗೆ ಶ್ರಮಿಸಿದವರನ್ನು ಸ್ಮರಿಸಿದರು ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹಳೆ ಕಮಿಟಿಯನ್ನು ವಿಸರ್ಜಿಸಿ ಹೊಸ ಕಮಿಟಿ ರಚನೆಗೆ ಅನುವು ಮಾಡಿ ಕೊಡಲಾಯಿತು ಹಾಗೂ ಹೊಸ ಕಮಿಟಿ ರಚನೆಯ ಉಸ್ತುವಾರಿಯನ್ನು A.S. ಅಶ್ರಫ್ ಇವರು ವಹಿಸಿದರು.

*ನೂತನ ಕಮಿಟಿಯ ಸಾರಥಿಗಳು ಈ ಕೆಳಗಿನಂತಿವೆ*

ಅಧ್ಯಕ್ಷರು : ಅಬ್ದುಲ್ ರಝಾಕ್ ನಂದ್ಯ

ಉಪಾಧ್ಯಕ್ಷರು :- ಶರೀಫ್ G.A ಹಾಗೂ ಶಮೀರ್ ಅಳಕೆ

ಗೌರವಾಧ್ಯಕ್ಷರು : M.S. ರಫೀಕ್

ಪ್ರಧಾನ ಕಾರ್ಯದರ್ಶಿ: ಮನ್ಸೂರ್ ತೋಕೂರ್

ಜೊತೆ ಕಾರ್ಯದರ್ಶಿ: ಶರೀಫ್ ಗೋಳಿಪಡ್ಪು ಹಾಗೂ ನವಾಝ್ ತೋಕೂರ್.

ಖಜಾಂಚಿ : ನೂರ್ ತೋಕೂರ್
ಲೆಕ್ಕ ಪರಿಶೋಧಕ : ಕಲಂದರ್ ಗುತ್ತು,

ಹಾಗು ಎಲ್ಲಾ ಏರಿಯಾ ಕಮಿಟಿಯ 5 ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.

Photos from Addoor Central Committee's post 23/05/2025
Want your organization to be the top-listed Non Profit Organization in Mangalore?
Click here to claim your Sponsored Listing.

Website

Address


Mangalore
574145