T S Srivathsa - MLA

T S Srivathsa - MLA

Share

MLA - Krishnaraja Constituency, Mysuru

Photos from T S Srivathsa - MLA's post 30/06/2026

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಹೋಬಳಿಯ ಗಟ್ಟವಾಡಿ ಗ್ರಾಮದ 'ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರ'ದಲ್ಲಿ ಆಯೋಜಿಸಲಾಗಿದ್ದ ಭವ್ಯ ಸ್ವಾಗತ ಸಮಾರಂಭದಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಳ್ಳಲಾಯಿತು.

​ಶ್ರೀ ಕ್ಷೇತ್ರಕ್ಕೆ ನೂತನವಾಗಿ ಆಗಮಿಸಿದ ಶ್ರೀ ಅಂಗಾರಕ ವರ್ಣ ಶಿಲೆಯ ಲಕ್ಷ್ಮೀನಾರಸಿಂಹ ಹಾಗೂ ಶ್ವೇತವರ್ಣ ಶಿಲೆಯ ಪಂಚಮುಖಿ ಪ್ರಾಣದೇವರ ವಿಗ್ರಹಗಳ ದರ್ಶನ ಪಡೆದು, ನಾಡಿನ ಸಮಸ್ತ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದೆನು. ಈ ಅದ್ಭುತ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡ ಕ್ಷಣ ಅತ್ಯಂತ ಧನ್ಯತೆಯ ಭಾವ ಮೂಡಿಸಿತು.

#ಮೈಸೂರು

Photos from T S Srivathsa - MLA's post 30/06/2026

29-06-2 026ರಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎಸ್ ಎಂ ಟಿ ಆಸ್ಪತ್ರೆ ಇಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಾಮಾನ್ಯ ಸಮಿತಿ ಸಭೆಯನ್ನು ನಡೆಸಿ ಸದರಿ ಆಸ್ಪತ್ರೆಯ ಕಾರ್ಯ ವೈಖರಿಯನ್ನು ಪರಿಶೀಲಿಸಲಾಯಿತು ಹಾಗೂ ಸಲಹೆ ಸೂಚನೆಗಳನ್ನು ನೀಡಲಾಯಿತು.

#ಮೈಸೂರು

Photos from T S Srivathsa - MLA's post 28/06/2026

ಇಂದು ಜರುಗಿದ ರಾಜ್ಯಮಟ್ಟದ ೩ನೇ ಯೋಗ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಂತಸದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಯೋಗಾಭ್ಯಾಸದ ಮೂಲಕ ಸದೃಢ ಹಾಗೂ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಒಗ್ಗೂಡಿ ಸಂಕಲ್ಪ ಮಾಡೋಣ. ಈ ಸಮ್ಮೇಳನವು ಎಲ್ಲಾ ಯೋಗಾಸಕ್ತರಿಗೆ ಮತ್ತು ಯೋಗ ಸಾಧಕರಿಗೆ ಉತ್ತಮ ಮಾರ್ಗದರ್ಶನ ನೀಡಲಿ ಎಂದು ತುಂಬು ಹೃದಯದಿಂದ ಆಶಿಸುತ್ತೇವೆ.

#ಯೋಗ #ಯೋಗ_ಸಮ್ಮೇಳನ #ಸ್ವಾಸ್ಥ್ಯ_ಸಮಾಜ #ಯೋಗಾಭ್ಯಾಸ

Photos from T S Srivathsa - MLA's post 27/06/2026

ನಾಡಪ್ರಭು ಶ್ರೀ ಕೆಂಪೇಗೌಡರ ೫೧೭ನೇ ಜಯಂತ್ಯೋತ್ಸವ - ೨೦೨೬ ರ ಪ್ರಯುಕ್ತ, ಮೈಸೂರಿನ ಆಲನಹಳ್ಳಿ ಕೆಂಪೇಗೌಡ ವೃತ್ತದಲ್ಲಿರುವ ಅವರ ಭವ್ಯ ಪ್ರತಿಮೆಗೆ ಶ್ರದ್ಧಾಪೂರ್ವಕವಾಗಿ ಮಾಲಾರ್ಪಣೆ ಮಾಡಿ, ಗೌರವ ನಮನಗಳನ್ನು ಸಲ್ಲಿಸಲಾಯಿತು.
ಭವ್ಯ ಬೆಂಗಳೂರಿನ ನಿರ್ಮಾತೃ, ಸುಶಾಸನದ ರೂವಾರಿ ಕೆಂಪೇಗೌಡರ ದೂರದೃಷ್ಟಿ ಹಾಗೂ ಜನಪರ ಆಡಳಿತ ನಮಗೆಲ್ಲರಿಗೂ ಸದಾ ಪ್ರೇರಣೆಯಾಗಿದೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ಈ ಮಹಾನ್ ನಾಯಕನಿಗೆ ಕೋಟಿ ಕೋಟಿ ನಮನಗಳು. ನಾಡಿನ ಸಮಸ್ತ ಜನತೆಗೆ ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು.
#ನಾಡಪ್ರಭು_ಕೆಂಪೇಗೌಡ #ಕೆಂಪೇಗೌಡ_ಜಯಂತಿ #ಆಲನಹಳ್ಳಿ #ಮೈಸೂರು #ಪುಷ್ಪನಮನ

27/06/2026

ಬೆಂಗಳೂರು ನಗರವನ್ನು ನಿರ್ಮಿಸಿ, ತಮ್ಮ ಅದ್ಭುತ ದೂರದೃಷ್ಟಿ ಹಾಗೂ ಶ್ರೇಷ್ಠ ಆಡಳಿತದಿಂದ ಇತಿಹಾಸ ಸೃಷ್ಟಿಸಿದ ಮಹಾನ್ ನಾಯಕ, ಸುಶಾಸನದ ಶಿಲ್ಪಿ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಪ್ರಯುಕ್ತ ಸಮಸ್ತ ನಾಡಿನ ಜನತೆಗೆ ಶುಭಾಶಯಗಳು.
ನಮ್ಮ ಭವ್ಯ ಬೆಂಗಳೂರು ನಗರದ ಸಂಸ್ಥಾಪಕರಾದ ಅವರಿಗೆ ಈ ಶುಭ ದಿನದಂದು ಕೋಟಿ ಕೋಟಿ ನಮನಗಳು. ಅವರ ಜನಪರ ಆಡಳಿತ, ದಕ್ಷತೆ ಹಾಗೂ ಅಭಿವೃದ್ಧಿಯ ಚಿಂತನೆಗಳು ನಮಗೆಲ್ಲರಿಗೂ ಸದಾ ದಾರಿದೀಪ ಹಾಗೂ ಪ್ರೇರಣೆಯಾಗಿವೆ.

Photos from T S Srivathsa - MLA's post 27/06/2026

ಮೈಸೂರಿನ ಪೊಲೀಸ್ ಭವನದಲ್ಲಿ ಏರ್ಪಡಿಸಲಾಗಿದ್ದ ಮೇಘಾ ಮತ್ತು ರಾಘವೇಂದ್ರ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿ, ಭಾವಿ ದಂಪತಿಗಳಿಗೆ ಆತ್ಮೀಯವಾಗಿ ಶುಭಕೋರಲಾಯಿತು. ನವ ಜೋಡಿಯ ಮುಂದಿನ ದಾಂಪತ್ಯ ಜೀವನವು ಸುಂದರ ಹಾಗೂ ಆನಂದಮಯವಾಗಿರಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ.

Want your public figure to be the top-listed Public Figure in Mysore?
Click here to claim your Sponsored Listing.

Category

Telephone

Website

Address


ಕರ್ತವ್ಯ ಭವನ, ಮೈಸೂರು ಮಹಾನಗರ ಪಾಲಿಕೆ/ವಲಯ 1, ಅಗ್ರಹಾರ
Mysore
570004