AR Krishnamurthy
Official Page of AR Krishnamurthy
Member of Karnataka Legislative Assembly
Kollegal Constituency
18/06/2026
ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಶೌರ್ಯದ ಪ್ರತೀಕವಾಗಿ ಭಾರತೀಯ ಇತಿಹಾಸದಲ್ಲಿ ಅಜರಾಮರರಾಗಿರುವ ವೀರವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
16/06/2026
ಇಂದು ಬಿಡದಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆಯಲ್ಲಿ ಭಾಗವಹಿಸಿ, ಮುಂಬರುವ ವಿಧಾನ ಪರಿಷತ್ ಚುನಾವಣೆ ಹಾಗೂ SIRಗೆ ಸಂಬಂಧಿಸಿದ ವಿಚಾರಗಳ ಕುರಿತು ನಡೆದ ಸಮಗ್ರ ಚರ್ಚೆಯಲ್ಲಿ ಪಾಲ್ಗೊಂಡ ಕ್ಷಣ.
Siddaramaiah DK Shivakumar
Randeep Singh Surjewala
B K Hariprasad
Indian National Congress - Karnataka
16/06/2026
ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆಗಳ ರದ್ದತಿಯಿಂದ ಕಂಗೆಟ್ಟಿರುವ ಯುವಜನತೆಯ ಪರವಾಗಿ ಧ್ವನಿಯೆತ್ತಲು ಶ್ರೀ Gandhi ಅವರು ಸನ್ನದ್ಧರಾಗಿದ್ದಾರೆ. ನಾವೆಲ್ಲರೂ ಒಂದಾಗಿ ನಮ್ಮ ಹಕ್ಕನ್ನು ಪ್ರತಿಪಾದಿಸೋಣ.
💥 ಕೋಟಾ ಮೆಗಾ ಸಮಾವೇಶ
📅 17 ಜೂನ್, 2026
15/06/2026
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂತೆಮರಹಳ್ಳಿ ಹೋಬಳಿಗೆ ಒಳಪಡುವ ವಿವಿಧ ಗ್ರಾಮಗಳಾದ ಚುಂಗಡಿಪುರ, ಹೊಸಮೋಳೆ, ನಡಕಲು ಮೋಳೆ , ಕಾವುದವಾಡಿ, ತೆಳ್ಳನೂರು, ಬಾನಹಳ್ಳಿ ಗ್ರಾಮಗಳಿಗೆ 3 ಕೋಟಿಗೂ ಅಧಿಕ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಕ್ಷಣ.
ಈ ವೇಳೆ ಮಾತನಾಡಿ ಕಳೆದ ಮೂರು ವರ್ಷದಲ್ಲಿ 500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಹಲವಾರು ಯೋಜನೆಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ, ಅಲ್ಲದೇ ಕ್ಷೇತ್ರದ ಎಲ್ಲಾ ವರ್ಗದ ಸಮುದಾಯಗಳಿಗೂ ಅನುದಾನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇನೆ. ಈಗಾಗಲೇ ಹಲವಾರು ನೀರಾವರಿ ಯೋಜನೆಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದೆನು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಚ್.ವಿ. ಚಂದು, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಮಹಾದೇವ ಪ್ರಸಾದ್, ಕಣ್ಣೆಗಾಲ ಮಾದೇಶ್, ಅನಂತು, ಚಿನ್ನಸ್ವಾಮಿ, ಲಕ್ಷ್ಮಿ, ಸವಿತಾ, ಚುಂಗಡಿಪುರ ನಟರಾಜ್, ಪಟೇಲ್ ನಟರಾಜ್, ಟಿ.ಎಸ್. ಕುಮಾರ್, ಲೋಕೇಶ್, ಸುಗಂಧರಾಜ್, ಸೋಮಣ್ಣ, ಶಿವಕುಮಾರ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
Indian National Congress - Karnataka
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ 4,000 ಇವಿಎಂಗಳು ಸುಟ್ಟು ಕರಕಲಾಗಿವೆ.
ಇದು ಆಕಸ್ಮಿಕವೋ ಅಥವಾ ವ್ಯವಸ್ಥಿತ ಸಾಕ್ಷ್ಯ ನಾಶದ ಆಟವೋ? ಚುನಾವಣಾ ಆಯೋಗವೇ ಉತ್ತರಿಸಿ!
ಇಂತಹ ಘಟನೆಗಳ ಹಿಂದೆ ರಾಜಕೀಯ ಉದ್ದೇಶವಿದೆಯೇ ಅಥವಾ ಆಡಳಿತಾತ್ಮಕ ಲೋಪವೇ ತನಿಖೆಯೇ ಉತ್ತರ ನೀಡಬೇಕು.?
Click here to claim your Sponsored Listing.
Category
Contact the public figure
Address
Mysore