Rafi Inspires

Rafi Inspires

Share

Writer

08/02/2023

ಸಾಮ್ಸಿ ಎಂಬ ಈ ಕುಗ್ರಾಮದ ಕುರಿತು ಒಂತಿಷ್ಟು ಮಾಹಿತಿ.

ಸಬಲೀಕರಣ ,ಬದಲಾವಣೆ, ಫಲಿತಾಂಶ .

ಇವಲ್ಲವೇ ಬದಲಾವಣೆ, ಇವಲ್ಲವೇ ಸಬಲೀಕರಣ. ಹಾಗಂತ ಇದರ ಚಾಲಕ ಶಕ್ತಿಯಾಗಿರುವ Suhairudeen Nurani زهيرالدين نوراني ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿಕೊಂಡು ಸಾಚಾರ್ ವರದಿ ಹಿಡಿದುಕೊಂಡು ವೆಸ್ಟ್ ಬೆಂಗಾಲ್ ಹೋದವರಲ್ಲ. ಆರ್ಥಿಕವಾಗಿ ಸ್ವಲ್ಪ ಸುಧಾರಿಸಿದ ಕುಟುಂಬವಾಗಿದೆ ಉಸ್ತಾದರದ್ದು. ಆದರೆ ಉಸ್ತಾದರ ಗುರು ಡಾ. ಹಕೀಂ ಅಝ್ಝರಿ ಇಂತಹ ಯುವ ಮನಸ್ಸುಗಳಿಗೆ ಬಡವರ ಮದ್ಯೆ ಮುತ್ತು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಕಾಣಿರಿ ಎಂಬ ದಿವ್ಯ ಸಂದೇಶ ಮನಸ್ಸಿಗೆ ಅಚ್ಚೊತ್ತಿ ಕೊಟ್ಟಿದ್ದಾರೆ. ದಶವಾರ್ಷಿಕ ದ ಸಂಭ್ರಮದಲ್ಲಿರುವ ವೆಸ್ಟ್ ಬೆಂಗಾಳ್ ತ್ವೈಭಾ ಮರ್ಕಝ್ ಸಂದೇಶ ಜನಮನಸ್ಸುಗಳಿಗೆ ತಲುಪಲಿ.

Photos from Rafi Inspires's post 05/02/2023

*ಸೂಕ್ಷ್ಮತೆ ಅಂದರೆ ಏನು!? ಈ ಇಖ್ಲಾಸಿನ ಕೈಗಳಿಗೆ ಶಕ್ತಿ ತುಂಬಬೇಕಾದವರು ಯಾರು!?*

ಅಜ್ಮೀರ್ ಮೌಲಿದ್ ದಿನ, ದಾರುಲ್ ಇರ್ಷಾದಿನ ಅಜ್ಮೀರ್ ಮೌಲೀದ್ ಅಂದರೆ ಅದೊಂದು ಆತ್ಮೀಯತೆ ಮತ್ತು ಇತಿಹಾಸವುಳ್ಳ ಆತ್ಮೀಯ ನಾಯಕತ್ವದ ನಾಯಕತ್ವದಲ್ಲಿರುವ ಮಜ್ಲಿಸ್ ಎಂಬುದು ಜನಜನಿತ. ಅಜ್ಮೀರ್ ಮೌಲೀದ್ ಬಂತೆಂದರೆ ಝೈನುಲ್ ಉಲಮಾ ವಿಶ್ವಾಸಿಗಳಿಗೆ ತಬರ್ರುಕ್ ಆಗಿ ಕೊಡುವ ಅನ್ನದಾನದ ತಯಾರಿಗೆ ಬೇಕಾಗಿ ಎಲ್ಲವೂ ನೇರ ನೋಟದಲ್ಲಿ ತಯಾರಾಗಬೇಕೆಂಬ ಧೃಢ ನಿಶ್ಚಯ ಇರುವ ವ್ಯಕ್ತಿತ್ವ. ಕೊನೆಗೆ ಬೆಂಕಿಪೊಟ್ಟಣ ,ಕಟ್ಟಿಗೆ ಎಲ್ಲವೂ ತಾನೇ ಮುಂದೆ ನಿಂತು ಸಜ್ಜುಗೊಳಿಸುವ ಆ ಆವೇಶ, ಆ ಮಹಾನರಿಗೆ ಅದರಲ್ಲಿರುವ ಆಸಕ್ತಿ ಈ ಬರಹದಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ. ಅದು ಅಲ್ಲಿ ನೇರ ಕಂಡವರಿಗೆಲ್ಲರಿಗೂ ಇರುವ ಒಂದು ಸತ್ಯ ಮತ್ತು ಅಷ್ಟೇ ವಾಸ್ತವ ಸಂಗತಿ.

ಅಜ್ಮೀರ್ ಮೌಲಿದ್ ದಿನವೂ ಅದೇ ರೀತಿ ವಿಶ್ವಾಸಿಗಳಿಗೆ ಅಜ್ಮೀರ್ ಖ್ವಾಜಾರ ಹೆಸರಲ್ಲಿ ಕೊಡುವ ಅನ್ನದಾನ ತಯಾರು ಮಾಡುವ ಕಡೆ ಗಮನಹರಿಸುತ್ತಲೇ ಇರುತ್ತಾರೆ. ಎಷ್ಟೇ ಗೌರವಾನ್ವಿತ ಅತಿಥಿಗಳು ಉಸ್ತಾದರ ಭೇಟಿಗೆ ಕಾಯುತ್ತಿದ್ದರೂ ಉ‌ಸ್ತಾದರು ಜನಸಾಮಾನ್ಯರೊಂದಿಗೆ ಬೆರೆತು ಅವರ ಸುಖ ಸಂತೋಷ ಮಾತನಾಡುತ್ತಾ ಅವರ ಹೊಟ್ಟೆ ತಣಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ. ಈ ವರ್ಷದ ದಾರುಲ್ ಇರ್ಷಾದಿನ ಅಜ್ಮೀರ್ ಮೌಲಿದ್ ನಲ್ಲಿ ನೇರವಾಗಿ ಭಾಗಿಯಾಗಲು ಅಸಾಧ್ಯವಾದರೂ ,ಲೈವ್ ಮುಖಾಂತರ ಉಸ್ತಾದರ ಮಾತನ್ನು ಆಲಿಸುವಾಗ ಉಸ್ತಾದರು ಹೇಳುತ್ತಿದ್ದ ಮಾತು , "ಎಲ್ಲರೂ ಅಜ್ಮೀರ್ ಖ್ವಾಜಾರ ಹೆಸರಲ್ಲಿ ನಿಮಗಾಗಿ ತಯಾರಿಸಿದ ಆಹಾರ ಸೇವಿಸಿ ಹೋಗಬೇಕು, ಆಹಾರ ಸೇವಿಸಿ ಯಾರಿಗಾದರೂ ಹಸಿವಾಗುವುದಾದರೆ ಮತ್ತೊಮ್ಮೆ ಆಹಾರ ಸೇವಿಸಿ" ಎಷ್ಟೊಂದು ಸೂಕ್ಷ್ಮತೆಯಿದೆ ಈ ಮಾತುಗಳಿಗೆ. ಇಂತಹ ನಿಷ್ಕಳಂಕ ಉಸ್ತಾದರಿಂದ ನೇರವಾಗಿ ಅನುಭವಕ್ಕೆ ಬಂದ ಘಟನೆಯೊಂದು ನಿಮ್ಮೊಂದಿಗೆ ಹಂಚಿಕೊಳ್ಳಬೇಕು.

*ಕಳೆದ ವರ್ಷದ ಅಜ್ಮೀರ್ ಮೌಲಿದ್ ಕಳೆದು ಒಂದೆರಡು ದಿನವಾಗಿದೆ. ಅಜ್ಮೀರ್ ಮೌಲಿದ್ ಭಾಗವಾಗಿ ಸಂಸ್ಥೆಗೆ ನಾನಾ ಕಡೆಗಳಿಂದ ಭಕ್ಷ್ಯ ಸಾಮಾಗ್ರಿಗಳು ಹರಕೆಯ ರೂಪದಲ್ಲಿ ಸಂಸ್ಥೆಗೆ ವಿಶ್ವಾಸಿಗಳು ತಲುಪಿಸುತ್ತಾರೆ. ಈ ರೀತಿ ತಲುಪಿಸಿದ ಸಾಮಾಗ್ರಿಗಳಲ್ಲಿ ಸಾಕಷ್ಟು ತೆಂಗಿನಾಕಾಯಿಗಳು ಇರುವುದುಂಟು. ಅವುಗಳ ಸಿಪ್ಪೆಯನ್ನು ತೆಗೆದು ಸಿಪ್ಪೆಯನ್ನು ಅಗತ್ಯ ಇರುವವರು ಸಂಸ್ಥೆಗೆ ಹದಿಯಾ ನೀಡಿ ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ಸಿಪ್ಪೆಗಳನ್ನು ಕೊಂಡೊಯ್ಯುವ ಸಾಲಿನಲ್ಲಿ ಶೈಖುನಾ ಝೈನುಲ್ ಉಲಮಾ ಕೂಡಾ ತನ್ನ ಮನೆಗೆ ಒಂದು ಸಣ್ಣ ಟೆಂಪೋ ತೆಂಗಿನಾಕಾಯಿ ಸಿಪ್ಪೆಯು ನೀರು ಕಾಯಿಸಲು ಅಗತ್ಯವನ್ನು ಮನಗಂಡು ತಲುಪಿಸುವಂತೆ ಹೇಳುತ್ತಾರೆ. ಸಂಸ್ಥೆಯ ಭಕ್ಷ್ಯ ಸಾಮಾಗ್ರಿಗಳ ಆಗುಹೋಗುಗಳನ್ನು ಸಂಸ್ಥೆಯ ಖಾದೀಂ ಆಗಿ ನೋಡಿಕೊಳ್ಳುವ ಸಿದ್ದೀಕ್ ಹಾಜಿ ಕಬಕರವರಲ್ಲಿ ಆ ತೆಂಗಿನಕಾಯಿ ಸಿಪ್ಪೆಯ ಹಣ ಹಾಗೂ ಮನೆಗೆ ತಲುಪಿಸುವ ಟೆಂಪೋದ ಬಾಡಿಗೆ ಝೈನುಲ್ ಉಲಮಾ ತನ್ನ ಕೀಸೆಯಿಂದ ತೆಗೆದು ಕೊಡುವಾಗ ,ಸಿದ್ದೀಕ್ ಹಾಜಿ ಆ ಹಣವನ್ನು ತೆಗೆಯಲು ಸ್ವಲ್ಪ ಹಿಂದೇಟು ಹಾಕಿ ,ಮ್ಯಾನೇಜರ್ ಮೂಲಕ ಹೇಳಿ ತೆಗೆಯುತ್ತೇನೆಂದು ಉಸ್ತಾದರಲ್ಲಿ ಹೇಳಿದಾಗ, ತನ್ನ ಭಾವದಲ್ಲಿ ಬದಲಾವಣೆಯೊಂದಿಗೆ ಝೈನುಲ್ ಉಲಮಾ ತನಗಿಂತ ದೊಡ್ಡ ತೀರ್ಮಾನ ವ್ಯಕ್ತಪಡಿಸುವವರು ಈ ಸಂಸ್ಥೆಯಲ್ಲಿದ್ದಾರೆಯೇ!? ಎಂದು ಮರು ಪ್ರಶ್ನೆ ಹಾಕಿ ಹಣ ಕೊಡುವಾಗ ಆ ಸನ್ನಿವೇಶಕ್ಕೆ ದೃಕ್ ಸಾಕ್ಷಿಯಾಗಿದ್ದೆನು.

ನಿಜವಾಗಿ ಸಾಮಾನ್ಯರು ಸಣ್ಣ ವಿಚಾರವಾಗಿ ಕಾಣುವ ಇಂತಹ ಸೂಕ್ಷ್ಮತೆಯ ವಿಚಾರಗಳಲ್ಲಿ ಝೈನುಲ್ ಉಲಮಾ ತನ್ನ ಮೈ ಮೇಲೆ ಸುರಿಯುವ ಬಿಸಿ ನೀರಲ್ಲೂ ಸಮುದಾಯದ ಹಕ್ಕು ಸೇರಬಾರದೆಂಬ ಧೃಢ ನಿಶ್ಚಯದಲ್ಲಿ ಸಂಸ್ಥೆಯನ್ನು ಇಖ್ಲಾಸಿನೊಂದಿಗೆ ಕಟ್ಟಿರುವ ವ್ಯಕ್ತಿತ್ವ ಎಂಬುದು ಸತ್ಯ. ಉಸ್ತಾದರ ಮಾತಿನಲ್ಲೇ ಕೇಳುವುದಾದರೆ ಸಂಸ್ಥೆಯಿಂದ ವೇತನ ಪಡೆದು ಜೀವಿಸುತ್ತಿಲ್ಲ, ಖರ್ಚು ವೆಚ್ಚಗಳಿಗೆ ,ತನ್ನ ಕಾರಿನ ಖರ್ಚು ಕೂಡಾ ವಿಶ್ವಾಸಿಗಳಿಂದ ತನಗೆ ಸಿಗುವ ಹದ್ಯಾದಿಂದ ಸರಿದೂಗಿಸಿಕೊಂಡು ,ತನ್ನ ಸಂಪತ್ತನ್ನೂ ಸಂಸ್ಥೆಗೆ ನೀಡಿ ಸಮುದಾಯದ ಸಬಲೀಕರಣದಲ್ಲಿ ಮಾಣಿ ಉಸ್ತಾದ್ ತೋರ್ಪಡಿಸಿದ ತ್ಯಾಗ ಅದು ಸಾಮಾನ್ಯರಾದ ನಾವು ಅರ್ಥೈಸಲು ಬಹಳಷ್ಟು ಕಷ್ಟವಿದೆ.

ಒಂದು ಕಡೆ ಶೈಖುನಾ ಝೈನುಲ್ ಉಲಮಾರ ವಯಸ್ಸು , ಮಗದೊಂದೆಡೆ ಸಂಸ್ಥೆಯ ಭಾರ , ಮತ್ತೊಂದು ಕಡೆ ದಾರುಲ್ ಇರ್ಷಾದ್ ಮೂಲಕ ಸಮುದಾಯದಲ್ಲಿರುವ ನಿರೀಕ್ಷೆ.ಇವೆಲ್ಲವೂ ಪೂರೈಸಲು ಆ ಇಖ್ಲಾಸಿನ ಕೈಗಳಿಗೆ ಶಕ್ತಿ ನೀಡಬೇಕಾಗಿರುವುದು ಅನಿವಾರ್ಯವಾಗಿದೆ.

*ಇದೀಗ ಸಂಸ್ಥೆಯು ತನ್ನ ಖರ್ಚುವೆಚ್ಚಗಳಲ್ಲಿ ಹೆಚ್ಚಿನ ಭಾರವಾಗಿ ಕಾಣುವ ವಿದ್ಯುತ್ ಬಿಲ್ ಗೆ ಒಂದು ಸಣ್ಣ ಮಟ್ಟಿನ ಪರಿಹಾರ ಕಾಣುವ ಯೋಜನೆ ಯೋಚಿಸಿದೆ. ಸುಮಾರು 80ಸಾವಿರ ರುಪಾಯಿಗಳು ಮಾಸಿಕವಾಗಿ ದಾರುಲ್ ಇರ್ಷಾದ್ ಗೆ ಬರುವ ವಿದ್ಯುತ್ ಬಿಲ್. 7200ಯೂನಿಟ್ ಆಗಿದೆ ವಿದ್ಯುತ್ ದಾರುಲ್ ಇರ್ಷಾದಿಗೆ ಮಾಸಿಕವಾಗಿ ಅಗತ್ಯ ಕಾಣುವುದು. ಒಬ್ಬ ವಿಶ್ವಾಸಿಯು 500ರೂಪಾಯಿ ನೀಡಿ ಒಂದು ಯೂನಿಟ್ ವಿದ್ಯುತ್ ಜವಾಬ್ದಾರಿ ವಹಿಸಿಕೊಂಡರೆ ಮುಂದಿನ 25ವರ್ಷಗಳು ಹೊಸದಾಗಿ ಹಾಕಿಕೊಳ್ಳುವ ಸೋಲಾರ್ ಸಿಸ್ಟಮ್ ಮೂಲಕ ದಾರುಲ್ ಇರ್ಷಾದಿನಲ್ಲಿ ವಿದ್ಯುತ್ ಪ್ರಸರಣ ತಮ್ಮ ಸ್ವದಕದ ಹಣದಿಂದ ಉಪಯೋಗಕ್ಕೆ ಸಿಗಲಿದೆ. ಆ ಮೂಲಕ ಸಂಸ್ಥೆಯಲ್ಲಿ ಕಲಿಯುವ ಹಾಫಿಳ್ ಗಳು, ದಅವಾ ವಿಧ್ಯಾರ್ಥಿಗಳು, ಮಸ್ಜೀದ್ ನಲ್ಲಿ ನಡೆಯುವ ಧಾರ್ಮಿಕ ಎಲ್ಲಾ ಆಗು ಹೋಗುಗಳಲ್ಲಿ ಬೆಳಗುವ ಬೆಳಕು ಇದಕ್ಕಾಗಿ ಸಹಕರಿಸುವವರ ಜೀವನದ ಸದುದ್ದೇಶಗಳು ಬೆಳಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾರಣ ಈ ಸಂಸ್ಥೆಯ ಸಾರಥಿಯ ಕೈಗಳು ಶುದ್ಧವಾಗಿದೆ. ಆ ಕೈಗಳು ಇಲಾಹನೆಡೆಗೆ ಸಹಕಾರಿಗಳನ್ನು ನೆನಪಿಸುತ್ತಾ ಸಹಸ್ರಾರು ಮುತ ಅಲ್ಲಿಮ್ ಗಳ ಮುಂದೆ ಪ್ರಾರ್ಥಿಸುವಾಗ ಇಲಾಹನು ಆ ಕೈಗಳನ್ನು ಕೈಬಿಡಲು ಸಾಧ್ಯವಿಲ್ಲ.

ಮೂವತ್ತು ಲಕ್ಷ ಖರ್ಚು ತಗಲುವ ಈ ಯೋಜನೆಯೊಂದಿಗೆ ಕೈಜೋಡಿ‌ಸಿ ಝೈನುಲ್ ಉಲಮಾರ ಕೈಗಳನ್ನು ಬಲಪಡಿಸೋಣ.

ಸಂಸ್ಥೆಯ ಈ ಯೋಜನೆಯೊಂದಿಗೆ ಕೈ ಜೋಡಿಸುವವರು ಗೂಗಲ್ ಪೇ, ಫೋನ್ ಪೇ ಮೂಲಕ ತಮ್ಮ ಸಹಕಾರ ನೀಡಲು ಇಚ್ಚಿಸುವವರು .

9764122891-sabith Na
9164266981-abdul lathif

1Unit. - ₹500
2Unit. -₹1000
5Unit. -₹2500
10Unit-₹5000

✍️ರಾಫಿ ನಗರ

Want your public figure to be the top-listed Public Figure in Pune?
Click here to claim your Sponsored Listing.

Category

Telephone

Website

Address


Pune